ಚೆನ್ನೈ: ಸುರೇಶ್ ರೈನಾ ವೈಯಕ್ತಿಕ ಕಾರಣ ನೀಡಿ ಐಪಿಎಲ್ 13 ರಿಂದ ಹೊರಬರುತ್ತಿದ್ದಂತೇ ಅವರ ಬಗ್ಗೆ ನಾನಾ ರೀತಿಯ ಊಹಾಪೋಹಗಳು ಹಬ್ಬಿತ್ತು. ಅದಕ್ಕೆ ಪುಷ್ಟಿ ನೀಡಿದ್ದು ಚೆನ್ನೈ ಮಾಲಿಕ ಎನ್ ಶ್ರೀನಿವಾಸನ್ ನೀಡಿದ್ದ ಹೇಳಿಕೆ.ರೈನಾ ಹೊರ ಹೋಗಿದ್ದರ ಬಗ್ಗೆ ಪರೋಕ್ಷವಾಗಿ ಶ್ರೀನಿವಾಸನ್ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಯಶಸ್ಸು ನೆತ್ತಿಗೇರಿದರೆ ಹಿಂದಿನ ಕಾಲದ ನಟರಂತೆ ಆವೇಶ ಹೆಚ್ಚಾಗುತ್ತದೆ ಎಂದು ಟಾಂಗ್ ನೀಡಿದ್ದರು. ಇದಕ್ಕೆ ಟ್ವಿಟರಿಗರು ಭಾರೀ ಟೀಕೆ ಮಾಡಿದ್ದರು. ಇದರ ಬೆನ್ನಲ್ಲೇ ಶ್ರೀನಿವಾಸನ್