ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೇಬರ್ ಟಾಪರ್ ಗುಜರಾತ್ ಲಯನ್ಸ್ ವಿರುದ್ದ ರೋಚಕ ಜಯಗಳಿಸಿ ಮೂರನೇ ಬಾರಿಗೆ ಐಪಿಎಲ್ ಫೈನಲ್ ತಲುಪಿದ್ದಾರೆ. ಏರುಪೇರಾಗುತ್ತಿದ್ದ ಅದೃಷ್ಟದ ಪಂದ್ಯದಲ್ಲಿ, ಪವರ್ ಪ್ಲೇ ಓವರುಗಳ ಅನುಕೂಲ ಪಡೆದ ರಾಯಲ್ ಚಾಲೆಂಜರ್ಸ್ ಗುಜರಾತ್ ಲಯನ್ಸ್ ವಿಕೆಟ್ಗಳನ್ನು ಉರುಳಿಸಿದರೂ ಡ್ವೇನ್ ಸ್ಮಿತ್ ಅವರು ಇನ್ನಿಂಗ್ಸ್ ಕಟ್ಟಿದ್ದರಿಂದ ಲಯನ್ಸ್ ತಂಡವನ್ನು ಹಳಿ ಮೇಲೆ ಇರಿಸಿತು.