ಮೆಲ್ಬೋರ್ನ್: ಈಗಿನ ಟೆಸ್ಟ್ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಹಾಗೂ ಸ್ಟೀವನ್ ಸ್ಮಿತ್ ಶ್ರೇಷ್ಠ ಬ್ಯಾಟ್ಸ್ ಮನ್ ಗಳಾಗಿದ್ದಾರೆ. ಆದರೆ ಸ್ಮಿತ್ ಭಾರತದ ನಾಯಕ ವಿರಾಟ್ ಕೊಹ್ಲಿಗಿಂತ ಶ್ರೇಷ್ಠ ಟೆಸ್ಟ್ ಆಟಗಾರರಾಗಿದ್ದಾರೆ ಎಂದು ಆಸ್ಟ್ರೇಲಿಯಾದ ಶೇನ್ ವಾರ್ನ್ ಅಭಿಪ್ರಾಯಟ್ಟಿದ್ದಾರೆ. ವಾರ್ನ್ ತಾನು ಆಡಿರುವ ಹಾಗೂ ನೋಡಿರುವ ಅಗ್ರ-11 ಬ್ಯಾಟ್ಸ್ ಮನ್ ಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಈ ಪಟ್ಟಿಯಲ್ಲಿ ಸ್ಮಿತ್ ಅವರು ಕೊಹ್ಲಿ ಅವರೊಂದಿಗೆ 10ನೇ ಸ್ಥಾನ ಹಂಚಿಕೊಂಡಿದ್ದಾರೆ. ನನ್ನ ಪ್ರಕಾರ ಸ್ಮಿತ್