ಜಸ್ಪ್ರೀತ್ ಬುಮ್ರಾ ಜತೆ ಹೋಲಿಕೆ ಮಾಡಿದ್ದಕ್ಕೆ ಅಭಿಮಾನಿಗೆ ತಿರುಗೇಟು ಕೊಟ್ಟ ವೇಗಿ ಸ್ಟುವರ್ಟ್ ಬ್ರಾಡ್

ಲಂಡನ್| Krishnaveni K| Last Modified ಬುಧವಾರ, 9 ಸೆಪ್ಟಂಬರ್ 2020 (11:35 IST)
ಲಂಡನ್: ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾರಷ್ಟು ನೀವು ಶ್ರೇಷ್ಠ ಬೌಲರ್ ಅಲ್ಲ ಬಿಡಿ ಎಂದು ನೆಟ್ಟಿಗರೊಬ್ಬರು ಟ್ರೋಲ್ ಮಾಡಿದ್ದಕ್ಕೆ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ತಿರುಗೇಟು ನೀಡಿದ್ದಾರೆ.

 

ಬ್ರಾಡ್ ತಮ್ಮ ಬೀಚ್ ಸೈಡ್ ಫೋಟೋವೊಂದನ್ನು ಹಾಕಿ ‘ಬಾರ್ ಗಾ ಜಿಮ್ ಗಾ ನೀವೇ ಊಹಿಸಿ’ ಎಂದು ಅಡಿಬರಹ ಬರೆದಿದ್ದರು. ಈ ಫೋಟೋಗೆ ನೆಟ್ಟಿಗರೊಬ್ಬರು ‘ನೀವು ಬುಮ್ರಾರಷ್ಟು ಶ್ರೇಷ್ಠ ಬೌಲರ್ ಅಲ್ಲ’ ಎಂದು ಕಾಲೆಳೆದಿದ್ದಾರೆ. ನೆಟ್ಟಿಗನಿಗೆ ಪ್ರತಿಕ್ರಿಯಿಸಿರುವ ಬ್ರಾಡ್ ‘ನನಗೂ ಬುಮ್ರಾ ಬೌಲಿಂಗ್ ಇಷ್ಟ. ನಿಮ್ಮ ಅಭಿಪ್ರಾಯವನ್ನು ಒಪ್ಪುವೆ. ಆದರೆ ಹೋಲಿಕೆ ಮಾಡಬೇಡಿ. ಉತ್ತಮ ಬೌಲರ್ ಗಳನ್ನು ಪ್ರೋತ್ಸಾಹಿಸಿ’ ಎಂದು ಉತ್ತರಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :