ಮುಂಬೈ: ಟೀಂ ಇಂಡಿಯಾ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಲವು ಸಮಯದಿಂದ ಹರಿದಾಡುತ್ತಲೇ ಇದೆ. ಇದಕ್ಕೆ ತಕ್ಕ ಹಾಗೆ ಇಬ್ಬರೂ ಈಗ ಇಂಗ್ಲೆಂಡ್ ನಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಇಬ್ಬರೂ ಅಧಿಕೃತವಾಗಿ ತಮ್ಮಿಬ್ಬರ ಸಂಬಂಧದ ಬಗ್ಗೆ ಹೇಳಿಕೊಳ್ಳದೇ ಹೋದರೂ ಇಬ್ಬರೂ ಪ್ರೇಮಿಗಳು ಎಂದು ಹಲವು ಬಾರಿ ಸಾಬೀತುಪಡಿಸಿದ್ದಾರೆ.ಇದೀಗ ಇಬ್ಬರ ಸಂಬಂಧಕ್ಕೆ ಸ್ವತಃ ಅಥಿಯಾ ತಂದೆ, ನಟ