ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರಿಗೆ ಕ್ರಿಕೆಟ್ ಲೋಕದಲ್ಲಿ ಬಹಳ ಮನ್ನಣೆ ಇದೆ. ಆದರೆ ಕ್ರಿಕೆಟ್ ಇನ್ನು ಅಂಬೆಗಾಲಿಕ್ಕುತ್ತಿರುವ ಅಮೇರಿಕಾದಲ್ಲಿ ಅವರಿಗೆ ಬಹಳ ನೋವನ್ನುಂಟು ಮಾಡುವ ಅನುಭವವಾಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ನಡೆದ ಅಂತಿಮ ಟಿ20 ಪಂದ್ಯವನ್ನು ವೀಕ್ಷಿಸಲು ಫ್ಲೋರಿಡಾಗೆ ಬಂದಿದ್ದ ಅವರಿಗೆ ಕ್ರೀಡಾಂಗಣ ಪ್ರವೇಶವನ್ನು ನಿರಾಕರಿಸಲಾಗಿದೆ. ಅಮೇರಿಕಾದಲ್ಲಿ ಕ್ರಿಕೆಟ್ನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವೆ