ಮುಂಬೈ: ಇಂಗ್ಲೆಂಡ್ ವಿರುದ್ಧ ಸರಣಿ ಸೋತಿದ್ದಕ್ಕೆ ಟೀಂ ಇಂಡಿಯಾವನ್ನು ಟೀಕಿಸಿದ ಮಾಜಿ ಕ್ರಿಕೆಟಿಗರಿಗೆ ತಿರುಗೇಟು ಕೊಡುವ ಭರದಲ್ಲಿ ಅವರ ಸಾಧನೆಯನ್ನೇ ಪ್ರಶ್ನೆ ಮಾಡಿದ್ದ ಕೋಚ್ ರವಿಶಾಸ್ತ್ರಿಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಿರುಗೇಟು ಕೊಟ್ಟಿದ್ದಾರೆ.ಕಳೆದ 10-15 ವರ್ಷದಲ್ಲಿ ದಿಗ್ಗಜರೆನಿಸಿಕೊಂಡ ಕ್ರಿಕೆಟಿಗರು ತಂಡದಲ್ಲಿದ್ದೂ ಟೀಂ ಇಂಡಿಯಾ ಮಾಡದ ಸಾಧನೆಯನ್ನು ಈ ತಂಡ ಮಾಡಿದೆ ಎಂದು ರವಿಶಾಸ್ತ್ರಿ ಕೊಚ್ಚಿಕೊಂಡಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸುನಿಲ್ ಗವಾಸ್ಕರ್ ಹಿಂದಿನ ದಾಖಲೆಯ ಅಂಕಿ ಅಂಶವನ್ನು ನೆನಪಿಸಿದ್ದಾರೆ.ಟೀಂ