ಮುಂಬೈ: ಟೀಂ ಇಂಡಿಯಾದಲ್ಲಿ ನಾಯಕನಿಗೊಂದು ರೂಲ್ಸ್, ಇತರ ಆಟಗಾರರಿಗೊಂದು ರೂಲ್ಸ್. ತಾರತಮ್ಯ ಇಲ್ಲಿ ತಾಂಡವವಾಡುತ್ತಿದೆ ಎಂದು ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ನಾಯಕ ವಿರಾಟ್ ಕೊಹ್ಲಿಗೆ ಪಿತೃತ್ವ ರಜೆ ನೀಡಿರುವ ಬಿಸಿಸಿಐ ಯುವ ವೇಗಿ ನಟರಾಜನ್ ಗೆ ಪಿತೃತ್ವ ರಜೆ ನಿರಾಕರಿಸಿದೆ. ಇಲ್ಲಿ ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ರೂಲ್ಸ್ ಎಂದು ಗವಾಸ್ಕರ್ ಮಾಧ್ಯಮವೊಂದರ ಅಂಕಣದಲ್ಲಿ ಟೀಕಿಸಿದ್ದಾರೆ. ಟಿ ನಟರಾಜನ್ ಈಗಷ್ಟೇ ತಂಡಕ್ಕೆ ಬಂದಿದ್ದಾರೆ. ಹಾಗಾಗಿ ಅವರಿಗೆ