Widgets Magazine

ಕನ್ನಡಿಗ ಕೆಎಲ್ ರಾಹುಲ್ ಬದಲು ಶಿಖರ್ ಧವನ್ ಆರಂಭಿಕರಾಗಲಿ ಎಂದ ಸುನಿಲ್ ಗವಾಸ್ಕರ್

NewDelhi| Krishnaveni K| Last Modified ಮಂಗಳವಾರ, 24 ಜನವರಿ 2017 (10:19 IST)
ನವದೆಹಲಿ: ಯಶಸ್ಸಿನ ಶಿಖರದಲ್ಲಿರುವ ಟೀಂ ಇಂಡಿಯಾಕ್ಕೆ ಇದೀಗ ಆರಂಭಿಕರದ್ದೇ ಚಿಂತೆ. ಇಂಗ್ಲೆಂಡ್ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಗಳು ಒಮ್ಮೆಯೂ ನಿಂತು ಆಡುವ ಸೂಚನೆ ನೀಡಲಿಲ್ಲ. ಆದರೆ ಫಾರ್ಮ್ ನಲ್ಲಿಲ್ಲದ ಆರಂಭಿಕರ ಪರ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್
ಬ್ಯಾಟಿಂಗ್ ಮಾಡಿದ್ದಾರೆ.ಆರಂಭಿಕರ ಪೈಕಿ ಶಿಖರ್ ಧವನ್ ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ಅವರ ಬದಲಿಗೆ ಬೇರೆ ಆಟಗಾರರನ್ನು ಆಡಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಹಾಗಿದ್ದರೂ, ಸುನಿಲ್ ಗವಾಸ್ಕರ್ ಧವನ್ ಬೆಂಬಲಕ್ಕೆ ನಿಂತಿದ್ದಾರೆ.ಮುಂಬರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗುವಾಗ ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಾರೆ. ಅವರ ಜತೆಗೆ ಎರಡನೇ ಆರಂಭಿಕರಾಗಿ ಶಿಖರ್ ಧವನ್ ಅವರೇ ಆಡಬೇಕು ಎಂದು ಗವಾಸ್ಕರ್ ಹೇಳಿದ್ದಾರೆ. ಧೋನಿ ಮತ್ತು ಕೊಹ್ಲಿ ಎಲ್ಲಾ ಪಂದ್ಯಗಳಲ್ಲೂ ರನ್ ಗಳಿಸಲು ಸಾಧ್ಯವಿಲ್ಲ. ರೋಹಿತ್ ಬಂದ ಮೇಲೆ ಅವರ ಜತೆ ಧವನ್ ಆರಂಭಿಕರಾಗಿ ಕಣಕ್ಕಿಳಿಯುವುದು ಬೆಸ್ಟ್ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :