ಮುಂಬೈ: ಇತ್ತೀಚೆಗೆ ಬಿಸಿಸಿಐ ಭಾರತೀಯ ಕ್ರಿಕೆಟಿಗರ ವೇತನ ಹೆಚ್ಚಿಸಿದೆ. ಪ್ರಮುಖ ಆಟಗಾರರಿಗೆ ಮೂರು ಕೆಟಗರಿಯಲ್ಲಿ ವೇತನ ನೀಡುತ್ತಿದೆ. ಆದರೆ ಈ ಮೂರೂ ವಿಭಾಗದಿಂದ ಕ್ರಿಕೆಟಿಗ ಸುರೇಶ್ ರೈನಾಗೆ ಕೊಕ್ ನೀಡಲಾಗಿದೆ. ಇದಕ್ಕೆ ಕಾರಣ ಅವರು ಕ್ರಿಕೆಟ್ ಗಿಂತ ಮನೆಗೇ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು. ಇತ್ತೀಚಿಗೆ ರೈನಾ ಸೀಮಿತ ಓವರ್ ಗಳ ಪಂದ್ಯದಲ್ಲೂ ಆಡುವುದು ವಿರಳವಾಗಿದೆ. ದೇಶೀಯ ಪಂದ್ಯದಲ್ಲೂ ಸಕ್ರಿಯರಾಗಿ ಪಾಲ್ಗೊಳ್ಳಲು ಮನಸ್ಸು ಮಾಡುತ್ತಿಲ್ಲ. ಮದುವೆಯಾದ ಮೇಲೆ ಅವರಿಗೆ ಕ್ರಿಕೆಟ್ ಗಿಂತ ಸಂಸಾರ