ಚೆನ್ನೈ: ಧೋನಿ-ಸುರೇಶ್ ರೈನಾ ಉತ್ತಮ ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತು. ಇದೀಗ ನಿವೃತ್ತಿ ವಿಚಾರದಲ್ಲೂ ತಾವಿಬ್ಬರೂ ಒಂದೇ ಎಂದು ರೈನಾ ಸಾರಿದ್ದಾರೆ. ಧೋನಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ತಾವೂ ಅದೇ ರೀತಿಯಲ್ಲಿ ನಿವೃತ್ತಿ ಘೋಷಿಸಿದ್ದಾರೆ. ಧೋನಿ ಇನ್ ಸ್ಟಾಗ್ರಾಂ ಮೂಲಕ ಚುಟುಕು ಸಂದೇಶ ಬರೆದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಇದಾಗಿ ಅರ್ಧಗಂಟೆ ಬಳಿಕ ರೈನಾ ಕೂಡಾ ಇನ್ ಸ್ಟಾಗ್ರಾಂ ಸಂದೇಶದ ಮೂಲಕ ನಿವೃತ್ತಿ ಘೋಷಣೆ ಮಾಡಿದ್ದಾರೆ.ನಿಮ್ಮ