ನವದೆಹಲಿ: ಉತ್ತಮ ಫಾರ್ಮ್ ನಲ್ಲಿದ್ದೂ ಪ್ರದರ್ಶನ ನೀಡಿದರೂ ನನ್ನನ್ನು ಟೀಂ ಇಂಡಿಯಾದಿಂದ ಹೊರ ಹಾಕಲಾಗಿದೆ ಎಂದು ಹಿರಿಯ ಬ್ಯಾಟ್ಸ್ ಮನ್ ಸುರೇಶ್ ರೈನಾ ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ದ.ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಆಯ್ಕೆಯಾಗಿರುವ ರೈನಾ ತಮಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವುದಾಗಿ ಹೇಳಿಕೊಂಡಿದ್ದಾರೆ.ಉತ್ತಮ ಪ್ರದರ್ಶನ ನೀಡಿದಾಗಲೂ ತಂಡದಲ್ಲಿ ಸ್ಥಾನ ಸಿಗದೇ ಇದ್ದಾಗ ತುಂಬಾ ಬೇಸರವಾಗಿತ್ತು. ಆದರೆ ಈಗ ಯೊ ಯೊ ಟೆಸ್ಟ್ ಪಾಸ್ ಮಾಡಿರುವೆ. ಆತ್ಮವಿಶ್ವಾಸ ಹೆಚ್ಚಿದೆ.