ದುಬೈ: ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ದಿಡೀರ್ ಆಗಿ ವೈಯಕ್ತಿಕ ಕಾರಣ ನೀಡಿ ಕೂಟದಿಂದಲೇ ನಿರ್ಗಮಿಸಿರುವುದಕ್ಕೆ ಕಾರಣ ತಿಳಿದುಬಂದಿದೆ. ಸುರೇಶ್ ರೈನಾ ಸಂಬಂಧಿಗಳ ಮನೆಯಲ್ಲಿ ನಡೆದ ಆ ಕೊಲೆಯೇ ಇದಕ್ಕೆಲ್ಲಾ ಕಾರಣ ಎನ್ನಲಾಗಿದೆ. ಆಗಸ್ಟ್ 19 ರಂದು ರೈನಾ ತಂದೆಯ ತಂಗಿ ಮನೆಯಲ್ಲಿ ಅನಾಮಧೇಯ ವ್ಯಕ್ತಿಗಳಿಂದ ದಾಳಿಯಾಗಿತ್ತು. ಇದರಲ್ಲಿ ರೈನಾ ಮಾವ ತೀರಿಕೊಂಡರೆ ಅತ್ತೆಯ ಆರೋಗ್ಯ ಸ್ಥಿತಿ