ಮುಂಬೈ: ವೈಯಕ್ತಿಕ ಕಾರಣ ನೀಡಿ ಐಪಿಎಲ್ ನಿಂದ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ಇದೀಗ ಸೋಷಿಯಲ್ ಮೀಡಿಯಾದಲ್ಲೂ ಕಾಣಿಸಿಕೊಂಡಿಲ್ಲ. ಕೆಲವು ಮೂಲಗಳ ಪ್ರಕಾರ ಚೆನ್ನೈ ತಂಡಕ್ಕೇ ಅವರು ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ.ಇನ್ ಸ್ಟಾಗ್ರಾಂನಲ್ಲಿ ಸದಾ ತಮ್ಮ ವರ್ಕೌಟ್ ವಿಡಿಯೋಗಳು, ಕ್ರಿಕೆಟ್ ಕುರಿತಾದ ಮಾಹಿತಿಯನ್ನು ಕಾಲ ಕಾಲಕ್ಕೆ ಪ್ರಕಟಿಸುತ್ತಲೇ ಇದ್ದ ರೈನಾ ಐಪಿಎಲ್ ಕೂಟದಿಂದ ಹೊರಬಂದ ಮೇಲೆ ಯಾವುದೇ ಪೋಸ್ಟ್ ಮಾಡಿಲ್ಲ. ತಂಡದಿಂದ ಹೊರಬಂದಿರುವುದಕ್ಕೆ ಸ್ಪಷ್ಟನೆಯನ್ನೂ