ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಸುರೇಶ್ ರೈನಾ ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದು ಮುಂದಿನ ಕೆಲವು ವಾರಗಳ ಕಾಲ ಕ್ರಿಕೆಟ್ ನಿಂದ ದೂರವಿರಲಿದ್ದಾರೆ.ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುವ ಸುರೇಶ್ ರೈನಾ ಮುಂದಿನ ಆರು ವಾರ ಕ್ರಿಕೆಟ್ ಆಡುವಂತಿಲ್ಲ. ಹೀಗಾಗಿ ಈ ಋತುವಿನ ದೇಶೀಯ ಕ್ರಿಕೆಟ್ ಪಂದ್ಯಾವಳಿಗಳು ಇನ್ನೇನು ಆರಂಭವಾಗಲಿದ್ದು, ರೈನಾ ಆರಂಭದ ಕೆಲವು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ.ಕಳೆದ ಕೆಲವು ತಿಂಗಳುಗಳಿಂದ ರೈನಾ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದಾರೆ.