Widgets Magazine

ಸೈಯದ್ ಮುಷ್ತಾಕ್ ಟೂರ್ನಿ: ಕರ್ನಾಟಕ/ತಮಿಳುನಾಡು ಫೈನಲ್ ಇಂದು

ಸೂರತ್| Krishnaveni K| Last Modified ಭಾನುವಾರ, 1 ಡಿಸೆಂಬರ್ 2019 (08:46 IST)
ಸೂರತ್: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂದು ಕರ್ನಾಟಕ ತಮಿಳುನಾಡು ತಂಡವನ್ನು ಎದುರಿಸುತ್ತಿದೆ.

 
ಹಾಲಿ ಚಾಂಪಿಯನ್ ಆಗಿರುವ ಕರ್ನಾಟಕ ಟೂರ್ನಿಯಲ್ಲಿ ಇದುವರೆಗೂ ಉತ್ತಮ ಪ್ರದರ್ಶನ ನೀಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದೆ. ಅದರಲ್ಲೂ ಅಭಿಮನ್ಯು ಮಿಥುನ್, ಕೆಎಲ್ ರಾಹುಲ್, ದೇವದತ್ತ ಪಡಿಕ್ಕಲ್ ಕರ್ನಾಟಕದ ಬಲ ಹೆಚ್ಚಿಸಿದ್ದಾರೆ.
 
ಅತ್ತ ತಮಿಳುನಾಡು ಕೂಡಾ ದುರ್ಬಲವೇನಲ್ಲ. ದಿನೇಶ್ ಕಾರ್ತಿಕ್ ನೇತೃತ್ವದ ತಂಡಕ್ಕೆ ರವಿಚಂದ್ರನ್ ಅಶ್ವಿನ್, ಮುರಳಿ ವಿಜಯ್ ರಂತಹ ಅನುಭವಿ ಆಟಗಾರರ ಜತೆಗೆ ವಿಜಯ್ ಶಂಕರ್, ವಾಷಿಂಗ್ಟನ್ ಸುಂದರ್ ನಂತಹ ಟಿ20 ಸ್ಪೆಷಲಿಸ್ಟ್ ಗಳೂ ಇದ್ದಾರೆ. ಹೀಗಾಗಿ ತಮಿಳುನಾಡನ್ನು ಎಚ್ಚರಿಕೆಯಿಂದ ಎದುರಿಸಬೇಕಿದೆ. ಪಂದ್ಯ ಸಂಜೆ 7 ಗಂಟೆಗೆ ನಡೆಯಲಿದ್ದು, ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.
ಇದರಲ್ಲಿ ಇನ್ನಷ್ಟು ಓದಿ :