ಸೂರತ್: ಸತತ ಎರಡನೇ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ನಲ್ಲಿ ತಮಿಳುನಾಡು ವಿರುದ್ಧ ರೋಚಕವಾಗಿ 1 ರನ್ ಗಳಿಂದ ಗೆಲುವು ದಾಖಲಿಸಿದೆ. ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ ಗಳಲ್ಲಿ 180 ರನ್ ಪೇರಿಸಿತ್ತು. ಕೆಎಲ್ ರಾಹುಲ್ 22, ದೇವದತ್ತ ಪಡಿಕ್ಕಲ್ 32, ಮನೀಶ್ ಪಾಂಡೆ ಅಜೇಯ 60 ಮತ್ತು ರೋಹನ್ ಕದಮ್ 35 ರನ್ ಗಳಿಸಿದರು.