ಜಮೈಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಅವಮಾನ ಎದುರಿಸಿದ್ದಾರೆ.ಕೊಹ್ಲಿ ಈ ಮೂಲಕ ಟೆಸ್ಟ್ ಪಂದ್ಯಗಳಲ್ಲಿ ತಮ್ಮ ನಾಲ್ಕನೇ ಗೋಲ್ಡನ್ ಡಕ್ ಸಂಪಾದಿಸುವ ಮೂಲಕ ವಿಂಡೀಸ್ ಸರಣಿ ಮುಗಿಸಿದ್ದಾರೆ.ಕೆಎಲ್ ರಾಹುಲ್ ಔಟಾದ ಬಳಿಕ ಕ್ರೀಸ್ ಗೆ ಬಂದ ಕೊಹ್ಲಿ ಎದುರಿಸಿದ ಮೊದಲ ಎಸೆತದಲ್ಲಿಯೇ ಕೆಮರ್ ರೋಚ್ ಬೌಲಿಂಗ್ ನಲ್ಲಿ ಔಟಾದರು.