ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ಯಾವುದೇ ಹುಡುಗಿಯರ ಜತೆ ಕಾಣಿಸಿಕೊಂಡರೂ ಅದಕ್ಕೊಂದು ರೆಕ್ಕೆ ಪುಕ್ಕಗಳು ಹುಟ್ಟಿಕೊಳ್ಳುತ್ತವೆ. ಅಂತೆಯೇ ಭುವನೇಶ್ವರ್ ಕುಮಾರ್ ವಿಚಾರದಲ್ಲೂ ಆಗಿದೆ. ಭುವಿ ಬಾಲಿವುಡ್ ನಟಿಯೊಬ್ಬಳ ಜತೆ ಸುತ್ತುತ್ತಿದ್ದಾರೆ, ಡಿನ್ನರ್ ಡೇಟ್ ನಡೆಸಿದ್ದಾರೆ ಎಂದೆಲ್ಲಾ ಪತ್ರಿಕೆಯೊಂದರಲ್ಲಿ ವರದಿಯಾಗಿತ್ತು. ಇದನ್ನು ನೋಡಿ ಸಿಟ್ಟಿಗೆದ್ದಿರುವ ಭುವಿ, ಇಂತಹ ಸುಳ್ಳು ಸುದ್ದಿಗಳನ್ನೆಲ್ಲಾ ನಿಲ್ಲಿಸಿ. ನನ್ನ ಜೀವನದಲ್ಲಿ ಹುಡುಗಿಯೊಬ್ಬಳ ಪ್ರವೇಶವಾದಾಗ ನಾನೇ ತಿಳಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದೆಲ್ಲಾ ಪ್ರಾರಂಭವಾಗಿದ್ದಕ್ಕೆ ಭುವಿಯೇ ಕಾರಣ. ಅವರು