Widgets Magazine

ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ

ರಾಜ್ ಕೋಟ್| Krishnaveni| Last Modified ಭಾನುವಾರ, 5 ನವೆಂಬರ್ 2017 (10:54 IST)
ರಾಜ್ ಕೋಟ್: ಟೀಂ ಇಂಡಿಯಾ ಕ್ರಿಕಟ್ ತಂಡದಲ್ಲಿ ಮೊದಲ ಬಾರಿಗೆ ಸ್ಥಾನ ಪಡೆಯುವುದೆಂದರೆ ಯಾವುದೇ ಕ್ರಿಕೆಟಿಗನಿಗೂ ಸ್ಮರಣೀಯ ಕ್ಷಣ. ಅಂತಹದ್ದರಲ್ಲಿ ಮೊಹಮ್ಮದ್ ಸಿರಾಜ್ ಎಂಬ ಯುವ ಕ್ರಿಕೆಟಿಗ ಕಣ್ಣೀರಿಟ್ಟಿದ್ದಾರೆ.
 
ಇದೇ ಮೊದಲ ಬಾರಿಗೆ ತಂಡಕ್ಕೆ ಆಯ್ಕೆಯಾದ ಮೊಹಮ್ಮದ್ ಸಿರಾಜ್ ಮೊದಲ ಬಾರಿಗೆ ನಿನ್ನೆ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದರು. ಕೋಚ್ ರವಿಶಾಸ್ತ್ರಿ ಸಿರಾಜ್ ಗೆ ಟೀಂ ಇಂಡಿಯಾ ಕ್ಯಾಪ್ ನೀಡಿ ಗೌರವಿಸಿದ್ದರು.
 
ಪಂದ್ಯಕ್ಕೆ ಮೊದಲು ರಾಷ್ಟ್ರಗೀತೆ ಹಾಡುವ ಕಾರ್ಯಕ್ರಮವಿರುತ್ತದೆ. ಈ ಸಂದರ್ಭದಲ್ಲಿ ಸಾಲಿನಲ್ಲಿ ನಿಂತಿದ್ದ ಸಿರಾಜ್ ಹಾಡುತ್ತಾ ಹಾಡುತ್ತಾ ಅತ್ತೇ ಬಿಟ್ಟರು. ಅಟೋ ರಿಕ್ಷಾ ಚಾಲಕನ ಪುತ್ರ ಸಿರಾಜ್ ಬಡತನದಿಂದ ಮೇಲೆ ಬಂದವರು. ಹೀಗಾಗಿ ಆಡಲು ಹೊರಟಾಗ ಕೊಂಚ ಭಾವುಕರಾದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :