ಮುಂಬೈ: ಟೀಂ ಇಂಡಿಯಾಕ್ಕೆ ಮೊದಲ ಬಾರಿಗೆ ವಿದೇಶೀ ನೆಲದಲ್ಲಿ ಗೆಲುವು ಕೊಡಿಸಿದ ಖ್ಯಾತಿಯ ನಾಯಕ ಅಜಿತ್ ವಾಡೇಕರ್ ಇನ್ನಿಲ್ಲವಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.ಬಹುಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ಮುಂಬೈಯಲ್ಲಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕ್ರಿಕೆಟ್ ಲೋಕ ಕಂಬನಿ ಮಿಡಿದಿದೆ.1970 ರ ದಶಕದಲ್ಲಿ ಭಾರತ ತಂಡಕ್ಕೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನೆಲದಲ್ಲಿ ಗೆಲುವು ಕೊಡಿಸಿದ ಕೀರ್ತಿ ವಾಡೇಕರ್ ಅವರದ್ದಾಗಿತ್ತು. ಆ ಕಾಲದಲ್ಲಿ ಇವೆರಡೂ ದೈತ್ಯ ತಂಡಗಳನ್ನು ಸೋಲಿಸುವುದೆಂದರೆ