ಚೀಟರ್ ಸ್ಟೀವ್ ಸ್ಮಿತ್ ಗೆ ಬುದ್ಧಿ ಕಲಿಸಿ: ಟೀಂ ಇಂಡಿಯಾ ಫ್ಯಾನ್ಸ್ ಆಗ್ರಹ

ಸಿಡ್ನಿ| Krishnaveni K| Last Modified ಮಂಗಳವಾರ, 12 ಜನವರಿ 2021 (09:10 IST)
ಸಿಡ್ನಿ: ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಮೈದಾನದಲ್ಲಿ ದುರ್ವರ್ತನೆ ತೋರಿದ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಸ್ಟೀವ್ ಸ್ಮಿತ್ ಗೆ ಶಿಕ್ಷೆಯಾಗಲಿ ಎಂದು ಟೀಂ ಇಂಡಿಯಾ ಅಭಿಮಾನಿಗಳು ಆಗ್ರಹಿಸಿದ್ದಾರೆ.

 
ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ರಿಷಬ್ ಪಂತ್ ರ ಬ್ಯಾಟಿಂಗ್ ಗಾರ್ಡ್ ಅಳಿಸಿದ್ದ ಸ್ಟೀವ್ ಸ್ಮಿತ್ ಕೃತ್ಯ ಸ್ಟಂಪ್ ಕ್ಯಾಮರಾದಲ್ಲಿ ದಾಖಲಾಗಿತ್ತು. ಇದರ ಬಗ್ಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡಾ ಧ್ವನಿಯೆತ್ತಿದ್ದು, ಏನೇ ಮಾಡಿದರೂ ನಿಮಗೆ ಟೀಂ ಇಂಡಿಯಾವನ್ನು ಸೋಲಿಸಲು ಆಗಲಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ. ಇನ್ನು, ಸ್ಮಿತ್ ವರ್ತನೆ ಬಗ್ಗೆ ಕೆಂಡ ಕಾರಿರುವ ಭಾರತೀಯ ಅಭಿಮಾನಿಗಳು ಹಿಂದೊಮ್ಮೆ ಚೆಂಡು ವಿರೂಪಗೊಳಿಸಿ ನಿಷೇಧಕ್ಕೊಳಗಾದರೂ ಸ್ಮಿತ್ ಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಮತ್ತೆ ಅವರನ್ನು ಪ್ರೆಸ್ ಮೀಟ್ ನಲ್ಲಿ ಅಳುವಂತೆ ಶಿಕ್ಷೆ ನೀಡಿ ಎಂದು ಐಸಿಸಿಗೆ ಆಗ್ರಹಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :