ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ಶಾಕ್

ಮುಂಬೈ| Krishnaveni| Last Modified ಮಂಗಳವಾರ, 21 ನವೆಂಬರ್ 2017 (10:42 IST)
ಮುಂಬೈ: ಶ್ರೀಲಂಕಾ ವಿರುದ್ಧ ಈಗಾಗಲೇ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಭುವನೇಶ್ವರ್ ಕುಮಾರ್ ದ್ವಿತೀಯ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಭುವನೇಶ್ವರ್ ಕುಮಾರ್ ತಮ್ಮ ಮದುವೆಗಾಗಿ ದ್ವಿತೀಯ ಪಂದ್ಯದಿಂದ ವಿನಾಯಿತಿ ಕೇಳಿದ್ದಾರೆ. ಇದು ಭಾರತಕ್ಕೆ ನಿಜವಾಗಿಯು ದೊಡ್ಡ ಹೊಡೆತ ನೀಡಲಿದೆ.ಭುವಿ ಜತೆಗೆ ಆರಂಭಿಕ ಶಿಖರ್ ಧವನ್ ಕೂಡಾ ವೈಯಕ್ತಿಕ ಕಾರಣಗಳಿಂದ ತಂಡದಿಂದ ಹೊರುಗುಳಿಯುವ ನಿರ್ಧಾರ ಮಾಡಿದ್ದಾರೆ. ಆದರೆ ಧವನ್ ಅನುಪಸ್ಥಿತಿಯಲ್ಲಿ ಮುರಳಿ ವಿಜಯ್ ಅವಕಾಶ ಪಡೆಯಲಿದ್ದಾರೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :