ಭಾರತ-ಆಸ್ಟ್ರೇಲಿಯಾ ಟೆಸ್ಟ್: ಗಡಿಬಿಡಿಯಲ್ಲಿ ವಿಕೆಟ್ ಕೈ ಚೆಲ್ಲಿದ ಟೀಂ ಇಂಡಿಯಾ

ಅಡಿಲೇಡ್, ಗುರುವಾರ, 6 ಡಿಸೆಂಬರ್ 2018 (09:09 IST)

ಅಡಿಲೇಡ್: ಒಂದೆಡೆ ಆಸ್ಟ್ರೇಲಿಯನ್ ಬೌಲರ್ ಗಳ ಸಂಘಟಿತ ಹೋರಾಟ. ಇನ್ನೊಂದೆಡೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳ ಯೋಜನೆ ತಪ್ಪಿದ ಬ್ಯಾಟಿಂಗ್.. ಪರಿಣಾಮ ಮೊದಲ ಟೆಸ್ಟ್ ನ ಮೊದಲ ದಿನ ಟೀಂ ಇಂಡಿಯಾ ಅವಸರದಲ್ಲಿ ವಿಕೆಟ್ ಕೈ ಚೆಲ್ಲಿ ಸಂಕಷ್ಟದಲ್ಲಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅದಕ್ಕೆ ತಕ್ಕಂತೆ ಆಡಲಿಲ್ಲ. ದುರ್ಬಲ ಎದುರಾಳಿಗಳ ಎದುರು ಆಡುವ ರೀತಿಯಲ್ಲಿ ಗಡಿಬಿಡಿಯಲ್ಲಿ ಆಡಿ ವಿಕೆಟ್ ಕೈ ಚೆಲ್ಲುತ್ತಾ ಸಾಗಿದೆ. ಟೆಸ್ಟ್ ಕ್ರಿಕೆಟ್ ನ ಲಕ್ಷಣ ಯಾವುದೇ ಬ್ಯಾಟ್ಸ್ ಮನ್ ನ ಇನಿಂಗ್ಸ್ ನಲ್ಲಿ ಕಾಣಲಿಲ್ಲ. ಅಪಾರ ನಿರೀಕ್ಷೆ ಹೊತ್ತಿದ್ದ ರೋಹಿತ್ ಶರ್ಮಾ ಇನ್ನೂ ಕಿರು ಮಾದರಿ ಕ್ರಿಕೆಟ್ ನ ಗುಂಗಿನಿಂದ ಹೊರಬಂದಂತೆ ಕಾಣಲಿಲ್ಲ.

ಒಂದು ಹಂತದಲ್ಲಿ 19 ರನ್ ಗಳಿಗೇ 3 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ ಶೋಚನೀಯ ಸ್ಥಿತಿ ನೋಡಿದರೆ 100 ರನ್ ಒಳಗೇ ಆಲೌಟ್ ಆಗುವ ಭೀತಿಯಲ್ಲಿತ್ತು. ಆದರೆ ರೋಹಿತ್ 37 ರನ್ ಗಳಿಸಿ ಮೊತ್ತ ಬೆಳೆಯಲು ನೆರವಾದರು. ವಿರಾಟ್ ಕೊಹ್ಲಿ 3 ರನ್ ಗಳಿಸುವಷ್ಟರಲ್ಲಿ ಉಸ್ಮಾನ್ ಖವಾಜ ಹಿಡಿದ ಅದ್ಭುತ ಕ್ಯಾಚ್ ಗೆ ಬಲಿಯಾದರೆ, ಕೆಎಲ್ ರಾಹುಲ್, ಮುರಳಿ ವಿಜಯ್ ಎಂದಿನಂತೆ ಮತ್ತೊಂದು ಫ್ಲಾಪ್ ಶೋ ನೀಡಿದರು. ಇತ್ತೀಚೆಗಿನ ವರದಿ ಬಂದಾಗ ಟೀಂ ಇಂಡಿಯಾ ಸ್ಕೋರ್ 5 ವಿಕೆಟ್ ಕಳೆದುಕೊಂಡು 106 ರನ್ ಆಗಿದೆ. ರಿಷಬ್ ಪಂತ್ 16 ಮತ್ತು ಚೇತೇಶ್ವರ ಪೂಜಾರ 23 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಗಾಯಗೊಂಡಿರುವ ಪೃಥ್ವಿ ಶಾ ಸ್ಥಿತಿ ಏನಾಗಿದೆ ಗೊತ್ತಾ? ರವಿಶಾಸ್ತ್ರಿ ಹೇಳಿದ್ದೇನು?

ಅಡಿಲೇಡ್: ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸುವ ಅವಕಾಶ ಪಡೆದ ...

news

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಆಟಗಾರರ ಹೆಸರು ಘೋಷಿಸಿದ ಟೀಂ ಇಂಡಿಯಾ

ಅಡಿಲೇಡ್: ನಾಳೆಯಿಂದ ಇಲ್ಲಿನ ಓವಲ್ ಮೈದಾನದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ 12 ...

news

ಆಸ್ಟ್ರೇಲಿಯಾದಲ್ಲಿ ಹೊಸ ದಾಖಲೆ ಬರೆಯಲು ವಿರಾಟ್ ಕೊಹ್ಲಿಗೆ ಎರಡೇ ಹೆಜ್ಜೆ

ಅಡಿಲೇಡ್: ನಾಳೆಯಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹೊಸ ...

news

ನಾಳೆಯಿಂದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಶುರು: ರೋಹಿತ್ ಶರ್ಮಾ ಆಡುವುದು ಪಕ್ಕಾ?

ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಟೆಸ್ಟ್ ಸರಣಿಗೆ ನಾಳೆಯಿಂದ ಚಾಲನೆ ಸಿಗಲಿದೆ. ...