ಮೊದಲ ಓವರ್ ನಲ್ಲಿಯೇ ರಿವ್ಯೂ ಹಾಳುಮಾಡಿದ ಭುವನೇಶ್ವರ್ ಕುಮಾರ್ ವಿರುದ್ಧ ಟ್ವಿಟಟಿಗರು ಗರಂ

ಲಂಡನ್| Krishnaveni K| Last Modified ಬುಧವಾರ, 10 ಜುಲೈ 2019 (09:27 IST)
ಲಂಡನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ವಿಶ್ವಕಪ್ ಸೆಮಿಫೈನಲ್ ನ ಮೊದಲ ಓವರ್ ನ ಮೊದಲ ಎಸೆತದಲ್ಲಿಯೇ ರಿವ್ಯೂ ಹಾಳು ಮಾಡಿದ್ದಕ್ಕೆ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ವಿರುದ್ಧ ಟ್ವಿಟರಿಗರು ಗರಂ ಆಗಿದ್ದಾರೆ.

 
ಮೊದಲ ಎಸೆತದಲ್ಲಿಯೇ ಕಿವೀಸ್ ಬ್ಯಾಟ್ಸ್ ಮನ್ ಮಾರ್ಟಿನ್ ಗುಪ್ಟಿಲ್ ಪ್ಯಾಡ್ ಗೆ ಬಾಲ್ ತಾಗಿದಾಗ ಭಾರತೀಯರು ಎಲ್ ಬಿಡಬ್ಲ್ಯುಗೆ ಮನವಿ ಮಾಡಿದರು. ಆದರೆ ಅಂಪಾಯರ್ ನಿರಾಕರಿಸಿದರು. ಬಳಿಕ ಬೌಲರ್ ಭುವನೇಶ್ವರ್ ಕುಮಾರ್ ಸಲಹೆ ಪಡೆದ ವಿರಾಟ್ ಕೊಹ್ಲಿ ಡಿಆರ್ ಎಸ್ ರಿವ್ಯೂಗೆ ಮನವಿ ಮಾಡಿದರು. ಆದರೆ ಬಾಲ್ ಲೆಗ್ ಸ್ಟಂಪ್ ನಿಂದಾಚೆ ಸಾಗುತ್ತಿದ್ದರಿಂದ ನಿಕಲಸ್ ಬಚಾವ್ ಆದರು. ಭಾರತಕ್ಕೆ ಮೊದಲ ಎಸೆತದಲ್ಲಿಯೇ ರಿವ್ಯೂ ಒಂದು ನಷ್ಟವಾಯಿತು. ಇದು ಟ್ವಿಟರಿಗರನ್ನು ಸಿಟ್ಟಿಗೆಬ್ಬಿಸಿದೆ.
 
ಮೊದಲ ಬಾಲ್ ನಲ್ಲಿಯೇ ರಿವ್ಯೂ ಪಡೆಯುವುದು ಎಂದರೆ ಎಂತಹಾ ಮೂರ್ಖತನ? ಭುವನೇಶ್ವರ್ ತಾವು ಎಲ್ ಬಿಡಬ್ಲ್ಯು ಮಾಡಿದೆ ಎಂಬ ಭ್ರಮೆಯಲ್ಲಿದ್ದಾರೆ. ಅಂತೂ ಮೊದಲ ಬಾಲ್ ನಲ್ಲಿಯೇ ರಿವ್ಯೂ ಕಳೆದುಕೊಳ್ಳುವಂತೆ ಮಾಡಿದ ಭುವಿಗೆ ಧನ್ಯವಾದ ಎಂದು ಟ್ವಿಟರಿಗರು ವ್ಯಂಗ್ಯ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :