ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾದಲ್ಲಿ ಪ್ರತಿಭೆಯಿದ್ದೂ ಕೆಲವು ಆಟಗಾರರು ಬೆಂಚ್ ಕಾಯಿಸುತ್ತಿದ್ದಾರೆ. ಇದರಿಂದಾಗಿ ಕೆಲವು ಆಟಗಾರರ ನಡುವೆ ವೈಮನಸ್ಯ ತಲೆದೋರಿದೆಯೇ? ಇದಕ್ಕೆ ವೇಗಿ ಜಸ್ಪ್ರೀತ್ ಬುಮ್ರಾ ಉತ್ತರಿಸಿದ್ದಾರೆ.ನಾವು ಒಂದು ತಂಡವಾಗಿ ಒಗ್ಗಟ್ಟಿನಲ್ಲಿದ್ದೇವೆ. ಎಲ್ಲರೂ ಸಂತೋಷವಾಗಿದ್ದೇವೆ. ಪ್ರತಿಯೊಬ್ಬರೂ ಇನ್ನೊಬ್ಬರ ಯಶಸ್ಸನ್ನು ಕಂಡು ಖುಷಿಪಡುತ್ತಿದ್ದೇವೆ. ಅಸೂಯೆ ಪಡುತ್ತಿಲ್ಲ. ತಂಡವಾಗಿ ಚೆನ್ನಾಗಿ ಆಡುತ್ತಿರುವಾಗ ಎಲ್ಲರೂ ಖುಷಿಯಾಗಿದ್ದಾರೆ ಎಂದು ಬುಮ್ರಾ ಸ್ಪಷ್ಟನೆ ನೀಡಿದ್ದಾರೆ.ವಿಶ್ವಕಪ್ ಗೆ ಇನ್ನು ಕೆಲವೇ ತಿಂಗಳುಗಳ ಬಾಕಿಯಿರುವ ಹಿನ್ನಲೆಯಲ್ಲಿ ಟೀಂ ಇಂಡಿಯಾದಲ್ಲಿ