ಮುಂಬೈ: ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆದ ಮೇಲೆ ತಂಡ ಸಾಕಷ್ಟು ಯಶಸ್ಸು ಕಂಡಿದೆ. ತಂಡದ ಆಟಗಾರರು ದಿಗ್ಗಜ ಸ್ಪಿನ್ನರ್ ಕಾರ್ಯವೈಖರಿಯಿಂದ ಖುಷ್ ಆಗಿದ್ದಾರೆ ಎಂದೆಲ್ಲಾ ನಾವು ಅಂದುಕೊಂಡಿರುವುದು ಸುಳ್ಳು ಎನ್ನುತ್ತಿದೆ ಒಂದು ವರದಿ. ಇತ್ತೀಚೆಗಷ್ಟೇ ಸಣ್ಣ ಪುಟ್ಟ ವಿಷಯಗಳಿಗೆಲ್ಲಾ ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತ ಮಂಡಳಿಗೆ ಕುಂಬ್ಳೆ ದೂರುತ್ತಾರೆ ಎಂದು ಬಿಸಿಸಿಐ ಆಕ್ಷೇಪಿಸಿತ್ತು. ಈ ಕಾರಣಕ್ಕೆ ಅವರ ಕೋಚ್ ಗುತ್ತಿಗೆ ಅವಧಿ ಮುಂದುವರಿಸದೇ ಇರಲು ತೀರ್ಮಾನಿಸಿತ್ತು