ಲಂಡನ್: ಕ್ರಿಕೆಟ್ ಸರಣಿಗಾಗಿ ಬಂದಿಳಿದ ಟೀಂ ಇಂಡಿಯಾ ಆಟಗಾರರಿಗೆ ಇಂಗ್ಲೆಂಡ್ ನೆಲಕ್ಕೆ ಕಾಲಿಟ್ಟ ತಕ್ಷಣ ಫುಲ್ ಡ್ರಿಲ್ ಶುರುವಾಗಿದೆ.ವಿರಾಟ್ ಕೊಹ್ಲಿ ನೇತೃತ್ವದ ಕ್ರಿಕೆಟಿಗರು ಇಂಗ್ಲೆಂಡ್ ನೆಲಕ್ಕೆ ಕಾಲಿಟ್ಟ ತಕ್ಷಣ ಸುಮ್ಮನೇ ಕೂರದೇ ಫಿಟ್ ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಕೊಹ್ಲಿ, ಮನೀಶ್ ಪಾಂಡೆ, ಕುಲದೀಪ್ ಯಾದವ್ ಸೇರಿದಂತೆ ಎಲ್ಲಾ ಕ್ರಿಕೆಟಿಗರು ಜಿಮ್ ನಲ್ಲಿ ಬೆವರು ಹರಿಸಿದ್ದಾರೆ.ಭಾರತ ಬಿಡುವಾಗಲೇ ವಿರಾಟ್ ಕೊಹ್ಲಿ ನಾವು ಕಾಫಿ ಕುಡಿಯಲು ಇಂಗ್ಲೆಂಡ್ ಗೆ ಹೋಗುತ್ತಿಲ್ಲ.