ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಧೋನಿ ನಿವೃತ್ತಿ ಘೋಷಿಸಿರುವುದರ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಅವರ ನಾಯಕತ್ವದಲ್ಲಿ ಬೆಳೆದ ಕ್ರಿಕೆಟಿಗರು ವಿಶೇಷ ಸಾಲುಗಳ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಧೋನಿ ಬಗ್ಗೆ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದು, ನೀವು ದೇಶಕ್ಕೆ ನೀಡಿದ ಕೊಡುಗೆ ಅಪಾರ. ನೀವು ಸದಾ ನಮ್ಮೊಳಗೇ ಇರುತ್ತೀರಿ. ನಿಮ್ಮಿಂದ ನಾನು ಕಲಿತಿದ್ದು ಅಪಾರ. ಒಬ್ಬ ವ್ಯಕ್ತಿಯಾಗಿಯೂ, ಕ್ರಿಕೆಟಿಗನಾಗಿಯೂ ನೋಡಿರುವೆ. ನಿಮ್ಮ ಮುಂದಿನ ಜೀವನಕ್ಕೆ