ಕೋಲ್ಕೊತ್ತಾ: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯ ಆಡಲಿಳಿದ ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೇ ತಂಡದ ರನ್ ಗತಿ ಇದ್ದಕ್ಕಿದ್ದಂತೆ ಪಾತಾಳಕ್ಕೆ ಕುಸಿಯಿತು. ಇದೆಲ್ಲಾ ಜಿಎಸ್ ಟಿ ಇಫೆಕ್ಟ್ ಅಂತೆ!ಹಾಗಂತ ಕಾಮೆಂಟರಿ ಮಾಡುತ್ತಿದ್ದ ವೀರೇಂದ್ರ ಸೆಹ್ವಾಗ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಕೊಹ್ಲಿ ಔಟಾದ ಬಳಿಕ, ಅವರ ಬೆನ್ನಲ್ಲೇ ಧೋನಿಯೂ ಔಟಾಗಿ ಪೆವಿಲಿಯನ್ ಸೇರಿಕೊಂಡ ಮೇಲೆ ಭಾರತದ ರನ್ ಗತಿ ಮಂಕಾಯಿತು. ಈ ಸಂದರ್ಭವನ್ನು ಸೆಹ್ವಾಗ್ ವಿಡಂಬನಾತ್ಮಕವಾಗಿ ಜಿಎಸ್ ಟಿ