ರಾಂಚಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮುಂದಿನ ಪಂದ್ಯಗಳು ಸರಣಿ ನಿರ್ಣಾಯಕವಾಗಲಿದೆ. ಹಾಗಿದ್ದರೂ ಈ ಪಂದ್ಯಗಳಿಗೆ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿಗೆ ವಿಶ್ರಾಂತಿ ನೀಡಲಾಗುವುದಂತೆ!ಹೀಗಂತ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ. ರಾಂಚಿ ಏಕದಿನ ಪಂದ್ಯದ ಸೋಲಿನ ಬಳಿಕ ಮಾತನಾಡಿರುವ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮುಂದಿನ ಎರಡು ಪಂದ್ಯಗಳಲ್ಲಿ ಧೋನಿ ಆಡಲ್ಲ. ಅವರಿಗೆ ವಿಶ್ರಾಂತಿ ನೀಡಲಾಗುತ್ತದೆ ಎಂದಿದ್ದಾರೆ.ಈಗಾಗಲೇ ಬ್ಯಾಟಿಂಗ್ ಬರಡುತನ ಅನುಭವಿಸುತ್ತಿರುವ ಟೀಂ