Widgets Magazine

ರೋಹಿತ್ ಶರ್ಮಾ ಸ್ಥಾನದಲ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ಆಡುವ ಅದೃಷ್ಟ ಈ ಆಟಗಾರರಿಗೆ?

ಮುಂಬೈ| Krishnaveni K| Last Modified ಮಂಗಳವಾರ, 17 ನವೆಂಬರ್ 2020 (09:18 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್ ಗಳ ಪಂದ್ಯಗಳಿಂದ ಗಾಯಾಳು ರೋಹಿತ್ ಶರ್ಮಾ ಹೊರಗುಳಿದಿದ್ದಾರೆ. ಹಿಟ್ ಮ್ಯಾನ್ ಇಲ್ಲದ ಟೀಂ ಇಂಡಿಯಾಕ್ಕೆ ಅವರ ಸ್ಥಾನವನ್ನು ತುಂಬಬಲ್ಲ ಆಟಗಾರನನ್ನು ಹುಡುಕುವ ಅನಿವಾರ್ಯತೆ ಎದುರಾಗಿದೆ.

 
ರೋಹಿತ್ ಸ್ಥಾನದಲ್ಲಿ ಕೆಎಲ್ ರಾಹುಲ್ ರನ್ನು ಆರಂಭಿಕರಾಗಿ ಕಣಕ್ಕಿಳಿಸಿದರೆ, ಕೆಳ ಕ್ರಮಾಂಕದಲ್ಲಿ ಗೇಮ್ ಫಿನಿಶ್ ಮಾಡಬಲ್ಲ ಆಟಗಾರನ ಕೊರತೆ ಎದುರಾಗುತ್ತದೆ. ಹೀಗಾಗಿ ಆರಂಭಿಕ ಸ್ಥಾನಕ್ಕೆ ಈಗ ತಂಡದಲ್ಲಿರುವ ಯುವ ಆಟಗಾರರ ಪೈಕಿ ಶಬ್ನಂ ಗಿಲ್, ಸಂಜು ಸ್ಯಾಮ್ಸನ್ ಅಥವಾ ಮಯಾಂಕ್ ಅಗರ್ವಾಲ್ ಸ್ಥಾನ ಪಡೆಯಬಹುದಾಗಿದೆ. ಈ ಮೂವರೂ ಈಗಾಗಲೇ ಐಪಿಎಲ್ ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾಕ್ಕೆ ಆರಂಭ ಒದಗಿಸುವ ಕೆಲಸ ಮೂವರಲ್ಲಿ ಯಾರ ಪಾಲಾಗುತ್ತದೆ ಎಂದು ನೋಡಬೇಕಿದೆ.
ಇದರಲ್ಲಿ ಇನ್ನಷ್ಟು ಓದಿ :