ಮುಂಬೈ: ರವಿಚಂದ್ರನ್ ಅಶ್ವಿನ್ ರನ್ನು ಮುಂಬರುವ ಇಂಗ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ರೆಸ್ಟ್ ನೀಡಿರುವುದು ಈ ಯುವ ಕ್ರಿಕೆಟಿಗನಿಗೆ ಇಷ್ಟವಾಗಿಲ್ಲವಂತೆ. ಆತನ ಜತೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳಬೇಕೆಂಬ ಕನಸು ಕನಸಾಗಿಯೇ ಉಳಿಯತಲ್ಲಾ ಎನ್ನುವುದು ಆತನ ಬೇಸರಕ್ಕೆ ಕಾರಣ. ಕಿರು ಮಾದರಿಯ ಸರಣಿಗೆ ಆಯ್ಕೆಯಾದ ಜಮ್ಮು ಕಾಶ್ಮೀರದ ಸ್ಪಿನ್ನರ್ ಪರ್ವೇಜ್ ರಸೂಲ್ ಈ ಆಸೆ ಹೊತ್ತುಕೊಂಡಿದ್ದ ಕ್ರಿಕೆಟಿಗ. ಆತನೂ ಯುವ ಸ್ಪಿನ್ನರ್. ಹೆಚ್ಚು ಹಿರಿಯರೊಂದಿಗೆ ಒಡನಾಡುವ ಅವಕಾಶ ಸಿಗುವುದೇ ಇಲ್ಲ.