‘ವಿರಾಟ್ ಕೊಹ್ಲಿ ಕುತ್ತಿಗೆ ನೆಟ್ಟಗೆ ಇಟ್ಟುಕೊಳ್ಳಲು ಕಲಿಯಲಿ’

ನವದೆಹಲಿ| Krishnaveni| Last Modified ಬುಧವಾರ, 27 ಸೆಪ್ಟಂಬರ್ 2017 (07:19 IST)
ನವದೆಹಲಿ: ಮತ್ತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಆನ್ ಫೀಲ್ಡ್ ವರ್ತನೆ ಚರ್ಚೆಗೆ ಗ್ರಾಸವಾಗಿದೆ. ಮೈದಾನದಲ್ಲಿ ಆಕ್ರಮಣಕಾರಿಯಾಗಿರುವ ಕೊಹ್ಲಿ ಮೇಲೆ ಮಾಜಿ ಇಂಗ್ಲೆಂಡ್ ಆಟಗಾರ ಡೇವಿಡ್ ಲಾಯ್ಡ್ ಕಿಡಿಕಾರಿದ್ದಾರೆ.
  ‘ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ವೀಕ್ಷಿಸಿದೆ. ಆದರೆ ಪ್ರತೀ ವಿಕೆಟ್ ಬಿದ್ದಾಗ ಕೊಹ್ಲಿ ವರ್ತನೆ ನಿಜಕ್ಕೂ ಗಮನಾರ್ಹ. ಬ್ಯಾಟ್ಸ್ ಮನ್ ಗೆ ಏನನ್ನೋ ಹೇಳಲಿದೆ ಎನ್ನುವಂತೆ ಆಡುತ್ತಾರೆ. ಹಾಗಾಗಬಾರದು. ಮೊದಲು ಕುತ್ತಿಗೆ ನೆಟ್ಟಗೆ ಇಟ್ಟುಕೊಳ್ಳುವುದನ್ನು ಈ ಯುವ ಆಟಗಾರ ಕಲಿಯಲಿ’ ಎಂದು ಖಡಕ್ ಆಗಿ ಹೇಳಿದ್ದಾರೆ.>  > ಅಲ್ಲದೆ, ಕೊಹ್ಲಿ ವರ್ತನೆ ಬಗ್ಗೆ ಖಂಡಿಸುತ್ತಾ ಲಾಯ್ಡ್, ಈ ಯುವಕ ಸಚಿನ್ ತೆಂಡುಲ್ಕರ್ ಜತೆಗೆ ಕೂತು ಹಲವು ವಿಷಯಗಳನ್ನು ಕಲಿಯಬೇಕಿದೆ ಎಂದು ಕಿವಿ ಮಾತು ಹೇಳಿದ್ದಾರೆ. ಕೊಹ್ಲಿ ಮೈದಾನದಲ್ಲಿ ತೋರುವ ಅತಿಯಾದ ಸಂಭ್ರಮ, ಕಿರುಚಾಟ ಕೆಲವರಿಗೆ ಕಿರಿ ಕಿರಿ ಎನಿಸಿದರೆ, ಇನ್ನು ಕೆಲವರು ಸಮರ್ಥಿಸಿಕೊಳ್ಳುತ್ತಾರೆ.  
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :