Widgets Magazine

ವಿಶ್ವಕಪ್ ನಲ್ಲಿ ಕೆಎಲ್ ರಾಹುಲ್ ಗಾಗಿ ಚಿಯರ್ ಮಾಡಲು ಬಂದ ಚೆಲುವೆ ಯಾರಿವಳು ಗೊತ್ತೇ?

ಲಂಡನ್| Krishnaveni K| Last Modified ಬುಧವಾರ, 29 ಮೇ 2019 (05:54 IST)
ಲಂಡನ್: ಟೀಂ ಇಂಡಿಯಾ ಏಕದಿನ ವಿಶ್ವಕಪ್ ತಂಡದ ಭಾಗವಾಗಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗಾಗಿ ಚಿಯರ್ ಮಾಡಲು ಚೆಲುವೆಯೊಬ್ಬಳು ಬರುತ್ತಿದ್ದಾಳೆ.

 
ಈಕೆ ಅಲಿಯಾ ಭಟ್ ಸ್ನೇಹಿತೆ ಆಕಾಂಕ್ಷ ರಂಜನ್ ಕಪೂರ್. ಮೂಲಗಳ ಪ್ರಕಾರ ರಾಹುಲ್ ಮತ್ತು ಈಕೆ ಜತೆ ಜತೆಯಾಗಿ ಓಡಾಡುತ್ತಿದ್ದಾರೆ ಎನ್ನಲಾಗಿದೆ. ಹಲವು ಬಾರಿ ಚರ್ಚ್, ಡಿನ್ನರ್ ಡೇಟ್, ಪಾರ್ಟಿಗಳಲ್ಲಿ ಈ ಜೋಡಿ ಜತೆಯಾಗಿ ಓಡಾಡುತ್ತಿದ್ದು ಕಂಡುಬಂದಿದ್ದು ಇದೆ.
 
ಇದೀಗ ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಭಾರತ ತಂಡ ಆಡುವಾಗ ಆಕಾಂಕ್ಷ ರಾಹುಲ್ ಗಾಗಿ ಚಿಯರ್ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಈ ಫ್ರೆಂಡ್ ಶಿಪ್ ಎಲ್ಲಿಯವರೆಗೆ ಬಂದು ನಿಲ್ಲುತ್ತದೋ ಕಾದು ನೋಡಬೇಕಿದೆ.
ಇದರಲ್ಲಿ ಇನ್ನಷ್ಟು ಓದಿ :