ರವಿಚಂದ್ರನ್ ಅಶ್ವಿನ್ ವಿಶ್ವಕಪ್ ಗೆ ಆಯ್ಕೆಯಾಗಲು ಈ ಆಟಗಾರನ ಬೆಂಬಲವೇ ಕಾರಣ!

ಮುಂಬೈ| Krishnaveni K| Last Modified ಶನಿವಾರ, 11 ಸೆಪ್ಟಂಬರ್ 2021 (09:17 IST)
ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡದಲ್ಲಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಯ್ಕೆಯಾಗಿದ್ದು ಹಲವರಿಗೆ ಅಚ್ಚರಿ ಉಂಟುಮಾಡಿತ್ತು. ಇದರ ಬಗ್ಗೆ ಒಂದು ಕುತೂಹಲಕಾರಿ ವಿಚಾರ ಬಹಿರಂಗವಾಗಿದೆ.
 > ಅಶ್ವಿನ್ ತಂಡಕ್ಕೆ ಆಯ್ಕೆಯಾಗಲು ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾ ಕಾರಣವಂತೆ! ಟಿ20 ತಂಡ ಆರಿಸುವ ಮೊದಲು ಆಯ್ಕೆ ಸಮಿತಿ ಉಪ ನಾಯಕ ರೋಹಿತ್ ಶರ್ಮಾ ಅಭಿಪ್ರಾಯವನ್ನೂ ಕೇಳಿತ್ತು. ಈ ವೇಳೆ ರೋಹಿತ್ ಅಶ್ವಿನ್ ರನ್ನು ಆರಿಸಲು ಸಲಹೆ ನೀಡಿದ್ದರು ಎನ್ನಲಾಗಿದೆ.>   ಅದರಂತೆ ರೋಹಿತ್ ಅಭಿಪ್ರಾಯಕ್ಕೆ ಬೆಲೆಕೊಟ್ಟು ಅಶ್ವಿನ್ ರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಕೊಹ್ಲಿ ಕೂಡಾ ರೋಹಿತ್ ರ ಅಭಿಪ್ರಾಯವನ್ನು ಬೆಂಬಲಿಸಿದರು ಎಂದು ಮೂಲಗಳಿಂದ ತಿಳಿದುಬಂದಿದೆ.



ಇದರಲ್ಲಿ ಇನ್ನಷ್ಟು ಓದಿ :