ಇತ್ತೀಚಿಗೆ ಅಮೇರಿಕದಲ್ಲಿ ನಡೆದ ಟಿ20 ಪಂದ್ಯಾವಳಿಯಲ್ಲಿ ಶತಕ ಸಿಡಿಸಿ ಗಮನ ಸೆಳೆದ ಕೆ.ಎಲ್.ರಾಹುಲ್ ಅವರನ್ನು ಟೀಮ್ ಇಂಡಿಯಾದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಮನಸಾರೆ ಹೊಗಳಿದ್ದಾರೆ. ರಾಹುಲ್ ವಿಶ್ವ ಕ್ರಿಕೆಟ್ನಲ್ಲಿ ಅತ್ಯಂತ ಸುಧಾರಿತ ಆಟಗಾರನಾಗಿದ್ದು ಭವಿಷ್ಯದಲ್ಲಿ ರಾಷ್ಟ್ರೀಯ ತಂಡಕ್ಕೆ ಬಹುದೊಡ್ಡ ಆಸ್ತಿಯಾಗಲಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.