Widgets Magazine

ಟೆಸ್ಟ್ ಸರಣಿಗೆ ಮೊದಲೇ ವಿರಾಟ್ ಕೊಹ್ಲಿಯನ್ನು ಕೆಣಕಿದ ಕಿವೀಸ್ ಬೌಲರ್

ಹ್ಯಾಮಿಲ್ಟನ್| Krishnaveni K| Last Modified ಬುಧವಾರ, 19 ಫೆಬ್ರವರಿ 2020 (09:25 IST)
ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ಟೆಸ್ಟ್ ಸರಣಿ ಆರಂಭವಾಗಲು ಇನ್ನು ಎರಡೇ ದಿನ ಬಾಕಿ ಉಳಿದಿದ್ದು ಇದಕ್ಕೆ ಮೊದಲೇ ಕಿವೀಸ್ ಬೌಲರ್ ಟ್ರೆಂಟ್ ಬೌಲ್ಟ್ ಮಾತಿನ ಸಮರ ಆರಂಭಿಸಿದ್ದಾರೆ.

 
ಗಾಯದಿಂದಾಗಿ ಕಳೆದ ಆರು ವಾರಗಳಿಂದ ವಿಶ್ರಾಂತಿಯಲ್ಲಿದ್ದ ಟ್ರೆಂಟ್ ಬೌಲ್ಟ್ ಭಾರತ ಸರಣಿಗೆ ಕಮ್ ಬ್ಯಾಕ್ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿಗೇ ಸವಾಲೆಸೆದಿದ್ದಾರೆ.
 
‘ವೈಯಕ್ತಿಕವಾಗಿ ನಾನು ಮತ್ತೆ ಮರಳಿ ಬಂದಿರುವುದು ಸಂತೋಷ ತಂದಿದೆ. ಅದರ ಜತೆಗೆ ವಿರಾಟ್ ಕೊಹ್ಲಿಯಂತಹ ಶ್ರೇಷ್ಠ ಆಟಗಾರರ ವಿಕೆಟ್ ಕೀಳಲು ಕಾಯುತ್ತಿದ್ದೇನೆ. ಅದಕ್ಕೆ ನಾನು ಇನ್ನು ಹೆಚ್ಚು ಕಾಯಲಾರೆ’ ಎಂದು ಬೌಲ್ಟ್ ಹೇಳಿಕೊಂಡಿದ್ದಾರೆ. ನ್ಯೂಜಿಲೆಂಡ್ ಗೆ ಬಂದಾಗಿನಿಂದ ಕೊಹ್ಲಿ ಕೂಡಾ ಹೇಳಿಕೊಳ್ಳುವಂತಹ ಆಟವಾಡಿಲ್ಲ. ಹೀಗಾಗಿ ಕೊಹ್ಲಿ ಈ ಸವಾಲನ್ನು ಮೆಟ್ಟಿ ಉತ್ತಮವಾಗಿ ಆಡಿದರೆ ಭಾರತಕ್ಕೆ ಲಾಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :