ಮುಂಬೈ: ಕ್ರಿಕೆಟ್ ಕಾಮೆಂಟೇಟರ್ ಆಕಾಶ್ ಚೋಪ್ರಾರಿಗೆ ನೀವು ವಿರಾಟ್ ಕೊಹ್ಲಿಯ ಚಮಚಾ ಎಂದು ಟ್ವಿಟರಿಗರೊಬ್ಬರು ಲೇವಡಿ ಮಾಡಿದ್ದಾರೆ. ಇದಕ್ಕೆ ಚೋಪ್ರಾ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಮನೀಶ್ ಪಾಂಡೆ ಒಂದೇ ಕೈಯಿಂದ ಅದ್ಭುತ ಕ್ಯಾಚ್ ಪಡೆದು ಡೇವಿಡ್ ವಾರ್ನರ್ ಔಟಾಗಲು ಕಾರಣವಾಗಿದ್ದರು. ಆದರೆ ಇದರ ಬಗ್ಗೆ ಸೊಲ್ಲೆತ್ತದೇ ವಿರಾಟ್ ಕೊಹ್ಲಿ ಪಡೆದ ಕ್ಯಾಚ್ ಬಗ್ಗೆ ಟ್ವಿಟರ್ ನಲ್ಲಿ ಆಕಾಶ್ ಚೋಪ್ರಾ ಹೊಗಳಿದ್ದರು.ಇದಕ್ಕೆ ಟ್ವಿಟರಿಗರೊಬ್ಬರು ಹಲೋ ವಿರಾಟ್