ಚೆನ್ನೈ: ಐಪಿಎಲ್ ಕೂಟದಿಂದ ವೈಯಕ್ತಿಕ ಕಾರಣ ನೀಡಿ ಹೊರಬಂದಿರುವ ಸುರೇಶ್ ರೈನಾ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಮಾಲಿಕ ಎನ್ ಶ್ರೀನಿವಾಸನ್ ನೀಡಿದ ಹೇಳಿಕೆ ಟ್ವಿಟರಿಗರ ಆಕ್ರೋಶಕ್ಕೆ ಕಾರಣವಾಗಿದೆ.ಸುರೇಶ್ ರೈನಾ ಹೋಟೆಲ್ ಕೊಠಡಿ ಬಗ್ಗೆ ಅಸಮಾಧಾನ ಹೊಂದಿದ್ದರು. ಧೋನಿ ಜತೆ ವಿರಸವೇರ್ಪಟ್ಟಿತ್ತು. ಇದಕ್ಕಾಗಿ ಕೂಟದಿಂದ ಹೊರನಡೆದಿದ್ದಾರೆ ಎಂಬಿತ್ಯಾದಿ ಮಾತುಗಳು ಕೇಳಿಬಂದಿತ್ತು. ಅದರ ಬೆನ್ನಲ್ಲೇ ಶ್ರೀನಿವಾಸನ್ ಕೂಡಾ ರೈನಾ ಮೇಲೆ ಕೆಂಡ ಕಾರಿದ್ದು, ನಾವು ಯಾರನ್ನೂ ಹಿಡಿದಿಟ್ಟುಕೊಳ್ಳಲಾಗದು. ಅವರೊಬ್ಬ ಬಂದು ಹೋದ