ಮುಂಬೈ: ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಸಂದರ್ಶನವೊಂದರಲ್ಲಿ ತಮ್ಮ ಕಷ್ಟದ ದಿನಗಳನ್ನು ನೆನೆಸಿಕೊಂಡಿದ್ದಾರೆ. ತಾವು ಕ್ರಿಕೆಟ್ ಕಲಿಯಲು ಆರಂಭಿಸಿದ ದಿನದಲ್ಲಿ ತೀರಾ ಬಡತನವಿತ್ತು. ಕ್ರಿಕೆಟ್ ಶೂ ಹಾಕಿಕೊಳ್ಳದೇ ಸಮ್ಮರ್ ಕ್ಯಾಂಪ್ ಗೆ ಬಂದಿದ್ದಕ್ಕೆ ಕೋಚ್ ಅವಮಾನ ಮಾಡಿದ್ದರು ಎಂದು ಉಮೇಶ್ ನೆನೆಸಿಕೊಂಡಿದ್ದಾರೆ.ನಾಗ್ಪುರ ಜಿಲ್ಲಾ ತಂಡದ ಪರ ಅತ್ಯುತ್ತಮವಾಗಿ ಆಡಿದ್ದಕ್ಕೆ ನನ್ನನ್ನು ಸಮ್ಮರ್ ಕ್ಯಾಂಪ್ ಗೆ ಕಳುಹಿಸಿದ್ದರು. ಆದರೆ ಅಲ್ಲಿ ಹೋದಾಗ ನನ್ನ ಬಳಿ ಶೂ ಕೂಡಾ ಇರಲಿಲ್ಲ.