ಲೀಡ್ಸ್: ಇತ್ತೀಚೆಗೆ ಟೀಂ ಇಂಡಿಯಾದ ಎರಡು ಟೆಸ್ಟ್ ಸರಣಿಗಳಲ್ಲಿ ವೇಗಿ ಉಮೇಶ್ ಯಾದವ್ ಗೆ ಸ್ಥಾನ ಸಿಕ್ಕಿಲ್ಲ. ಹೊಸಬರ ಅಬ್ಬರದಲ್ಲಿ ಉಮೇಶ್ ಮೂಲೆಗುಂಪಾಗುತ್ತಿದ್ದಾರೆಯೇ? ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಆಡಿದ ಬಳಿಕ ಉಮೇಶ್ ಯಾದವ್ ಗೆ ಅವಕಾಶ ಸಿಕ್ಕಿಲ್ಲ. ಆ ಸರಣಿಯಲ್ಲಿ ಉಮೇಶ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಬಳಿಕ ತಂಡಕ್ಕೆ ಸೇರ್ಪಡೆಯಾದವರು ಮೊಹಮ್ಮದ್ ಸಿರಾಜ್, ಶ್ರಾದ್ಧೂಲ್ ಠಾಕೂರ್.ಈ ಇಬ್ಬರೂ ವೇಗಿಗಳು ಈಗ ಟೀಂ ಇಂಡಿಯಾದಲ್ಲಿ ಹಿರಿಯರನ್ನೂ ಮೀರಿಸುವ ಪ್ರದರ್ಶನ ನೀಡುತ್ತಿದ್ದಾರೆ.