ಕ್ರಿಕೆಟಿಗ ಹನುಮ ವಿಹಾರಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ

ನವದೆಹಲಿ| Krishnaveni K| Last Modified ಮಂಗಳವಾರ, 12 ಜನವರಿ 2021 (09:13 IST)
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ನಿಧಾನಗತಿಯ ಬ್ಯಾಟಿಂಗ್ ನಡೆಸಿ ಟೀಂ ಇಂಡಿಯಾ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿ ಪಾತ್ರವಹಿಸಿದ್ದ ಕ್ರಿಕೆಟಿಗ ಹನುಮ ವಿಹಾರಿ ವಿರುದ್ಧ ಟ್ವೀಟ್ ಮಾಡಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ವಿವಾದ ಸೃಷ್ಟಿಸಿದ್ದಾರೆ.
 > 7 ರನ್ ಮಾಡಲು 109 ಎಸೆತ! ಹನುಮ ವಿಹಾರಿ ಟೀಂ ಇಂಡಿಯಾ ಗೆಲುವಿನ ಅವಕಾಶ ಕಸಿದಿದ್ದು ಮಾತ್ರವಲ್ಲ, ಕ್ರಿಕೆಟ್ ನ್ನೇ ಕೊಲೆ ಮಾಡಿದರು. ಗೆಲುವಿಗಾಗಿ ಪ್ರಯತ್ನವನ್ನೂ ಮಾಡದೇ ಇರುವುದು ಕ್ರಿಮಿನಲ್. ದಯವಿಟ್ಟು ಗಮನಿಸಿ ನನಗೆ ಕ್ರಿಕೆಟ್ ಬಗ್ಗೆ ಏನೂ ಗೊತ್ತಿಲ್ಲ’ ಎಂದು ಬಾಬುಲ್ ಟ್ವೀಟ್ ಮಾಡಿದ್ದರು. ಇದು ಅಭಿಮಾನಿಗಳನ್ನು ಕೆರಳಿಸಿದೆ. ಸೋಲುತ್ತಿದ್ದ ಪಂದ್ಯವನ್ನು ತಾಳ್ಮೆಯಿಂದ ದಿನವಿಡೀ ಬ್ಯಾಟಿಂಗ್ ಮಾಡಿ ಡ್ರಾ ಮಾಡಿಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿದ ಆಟಗಾರನನ್ನು ಅಭಿನಂದಿಸುವ ಬದಲು ಈ ರೀತಿ ಟೀಕಿಸಿದ್ದಕ್ಕೆ ನೆಟ್ಟಿಗರು ಸಚಿವರಿಗೆ ತಿರುಗೇಟು ನೀಡಿದ್ದಾರೆ.>


ಇದರಲ್ಲಿ ಇನ್ನಷ್ಟು ಓದಿ :