ಅಗಲಿದ ಅಮ್ಮ, ಸಹೋದರಿಗೆ ವೇದಾ ಕೃಷ್ಣಮೂರ್ತಿ ಭಾವುಕ ಸಂದೇಶ

ಬೆಂಗಳೂರು| Krishnaveni K| Last Modified ಮಂಗಳವಾರ, 11 ಮೇ 2021 (09:35 IST)
ಬೆಂಗಳೂರು: ಕೊರೋನಾದಿಂದ ತಾಯಿ ಮತ್ತು ಸಹೋದರಿಯನ್ನು ಒಂದೇ ವಾರದ ಅಂತರದಲ್ಲಿ ಕಳೆದುಕೊಂಡ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಭಾವುಕ ಸಂದೇಶ ಬರೆದಿದ್ದಾರೆ.

 
ಕಡೂರಿನಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದ ವೇದಾ ತಾಯಿ ತೀರಿಕೊಂಡ ಎರಡು ವಾರದ ಬಳಿಕ ಅವರ ಸಹೋದರಿಯೂ ಕೊನೆಯುಸಿರೆಳೆದಿದ್ದರು. ಈ ಎರಡು ಆಘಾತಗಳನ್ನು ಒಟ್ಟೊಟ್ಟಿಗೆ ಅನುಭವಿಸಿದ ವೇದಾ ಈಗ ಸಾಮಾಜಿಕ ಜಾಲತಾಣದಲ್ಲಿ ಭಾವುಕರಾಗಿ ಸಂದೇಶ ಬರೆದಿದ್ದಾರೆ.
 
‘ಇಂತಹದ್ದೊಂದು ಘಟನೆ ಆಗುತ್ತದೆಂದು ಯಾರಿಗೂ ಕಲ್ಪನೆಯೇ ಇರಲಿಲ್ಲ. ನನ್ನ ಹೃದಯವೇ ಛಿದ್ರವಾಗಿದೆ. ಅಮ್ಮ, ನೀನು ನನ್ನನ್ನು ಎಂತಹದ್ದೇ ಕಷ್ಟ ಬಂದರೂ ಹೋರಾಡುವ ಪ್ರಬಲ ವ್ಯಕ್ತಿಯಾಗಿಸಿರುವೆ. ನಾನು ನೋಡಿದ ಅತೀ ಸುಂದರ, ನಿಸ್ವಾರ್ಥ ವ್ಯಕ್ತಿ ನೀನು. ಅಕ್ಕಾ, ನಿನಗೆ ನಾನು ಅತ್ಯಂತ ಫೇವರಿಟ್ ವ್ಯಕ್ತಿಯಾಗಿದ್ದೆ. ಕೊನೆಯ ಕ್ಷಣದವರೆಗೂ ಹೋರಾಡಿದ ಹೋರಾಟಗಾರ್ತಿ ನೀನು. ನೀವಿಬ್ಬರೂ ನನ್ನ ಎಲ್ಲಾ ಕ್ಷಣಗಳಲ್ಲೂ ಸಂತೋಷಪಟ್ಟವರು. ನಿಮ್ಮ ಜೊತೆಗೆ ಕಳೆದ ಕೊನೆಯ ಕ್ಷಣಗಳು ತುಂಬಾ ಸಂತೋಷದಾಯಕವಾಗಿತ್ತು. ಅದುವೇ ಕೊನೆಯ ಗಳಿಗೆಯಾಗಿರಬಹುದು ಎಂದು ನಾವು ಊಹಿಸಿಯೇ ಇರಲಿಲ್ಲ’ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :