Widgets Magazine

ವಿಶ್ವಕಪ್ ನಿಂದ ಹೊರಬಿದ್ದ ವಿಜಯ್ ಶಂಕರ್, ಕನ್ನಡಿಗ ಮಯಾಂಕ್ ಅಗರ್ವಾಲ್ ಗೆ ಬಯಸದೇ ಬಂದ ಭಾಗ್ಯ!

ಲಂಡನ್| Krishnaveni K| Last Modified ಸೋಮವಾರ, 1 ಜುಲೈ 2019 (15:43 IST)
ಲಂಡನ್: ರಲ್ಲಿ ಟೀಂ ಇಂಡಿಯಾದಿಂದ ಮತ್ತೊಬ್ಬ ಆಟಗಾರ ವಿಜಯ್ ಶಂಕರ್ ಗಾಯದ ಕಾರಣದಿಂದ ಹೊರನಡೆದಿದ್ದಾರೆ.

 
ಆಲ್ ರೌಂಡರ್ ವಿಜಯ್ ಶಂಕರ್ ಅಭ್ಯಾಸದ ವೇಳೆ ಹೆಬ್ಬರಳಿಗೆ ಗಾಯ ಮಾಡಿಕೊಂಡಿದ್ದರು. ಈ ಗಾಯದಿಂದ ಚೇತರಿಸಿಕೊಳ್ಳದ ಕಾರಣ ವಿಜಯ್ ಶಂಕರ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
 
ಇದೀಗ ವಿಜಯ್ ಶಂಕರ್ ಸ್ಥಾನಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಭಾರತದ ಪರ ಇಂಗ್ಲೆಂಡ್ ನಲ್ಲಿ ಟೆಸ್ಟ್ ಕ್ರಿಕೆಟ್ ಆಡಿದ್ದ ಮಯಾಂಕ್ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ್ದರು. ದೇಶೀಯ ಟೂರ್ನಿಯಲ್ಲಿ ಸಾಕಷ್ಟು ರನ್ ಗಳಿಸಿರುವ ಮಯಾಂಕ್ ಗೆ ಅನಿರೀಕ್ಷಿತವಾಗಿ ವಿಶ್ವಕಪ್ ನಂತಹ ಮಹತ್ವದ ಕೂಟದಲ್ಲಿ ದೇಶ ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ನಿಜಕ್ಕೂ ಅದೃಷ್ಟವೇ ಸರಿ.
ಇದರಲ್ಲಿ ಇನ್ನಷ್ಟು ಓದಿ :