ಅದು ವಿರಾಟ್-ಅನುಷ್ಕಾ ಮಗಳ ಫೋಟೋ ಅಲ್ಲ: ವಿಕಾಸ್ ಕೊಹ್ಲಿ ಸ್ಪಷ್ಟನೆ

ಮುಂಬೈ| Krishnaveni K| Last Modified ಬುಧವಾರ, 13 ಜನವರಿ 2021 (09:04 IST)
ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ತಾವು ಪ್ರಕಟಿಸಿದ ಫೋಟೋ ವಿರಾಟ್-ಅನುಷ್ಕಾ ಮಗಳ ಫೋಟೋ ಅಲ್ಲ ಎಂದು ವಿರಾಟ್ ಸಹೋದರ ವಿಕಾಸ್ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.

 
ಜನವರಿ 11 ರಂದು ವಿರಾಟ್ ದಂಪತಿಗೆ ಹೆಣ್ಣು ಮಗುವಾದ ಖುಷಿಯನ್ನು ಹಂಚಿಕೊಂಡ ವಿಕಾಸ್ ಮಗುವಿನ ಕಾಲುಗಳ ಫೋಟೋ ಪ್ರಕಟಿಸಿದ್ದರು. ಇದನ್ನು ನೋಡಿ ಇದು ವಿರುಷ್ಕಾ ಮಗುವಿನ ಫೋಟೋ ಇರಬೇಕೆಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಇದೀಗ ಸ್ಪಷ್ಟನೆ ನೀಡಿರುವ ವಿಕಾಸ್ ‘ನಾನು ನಿನ್ನೆ ಪ್ರಕಟಿಸಿದ ಫೋಟೋ ವಿರಾಟ್-ಅನುಷ್ಕಾ ಮಗುವಿನ ಫೋಟೋ ಅಲ್ಲ. ಅದು ಸಾಮಾನ್ಯ ಫೋಟೋವಾಗಿತ್ತಷ್ಟೇ’ ಎಂದು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :