ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗಷ್ಟೇ ಇಟೆಲಿಯಲ್ಲಿ ವಿವಾಹವಾದರೆಂದು ಫೋಟೋಗಳನ್ನು ನಾವು ನೋಡಿದ್ದೇವೆ. ಅದರ ಪ್ರಯುಕ್ತ ಈ ಜೋಡಿ ಮುಂಬೈ ಮತ್ತು ದೆಹಲಿಯಲ್ಲಿ ಆರತಕ್ಷತೆಯನ್ನೂ ಏರ್ಪಡಿಸಿತ್ತು. ಆದರೆ ಇವರಿಬ್ಬರೂ ಕಾನೂನಿನ ದೃಷ್ಟಿಯಲ್ಲಿ ಮದುವೆಯೇ ಆಗಿಲ್ಲ! ಹೌದು. ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮದುವೆಯ ನೋಂದಣಿ ಮಾಡಿಸಿಕೊಂಡಿಲ್ಲ ಎನ್ನುವುದು ಇದೀಗ ಬಹಿರಂಗವಾಗಿದೆ.ಪಂಜಾಬ್-ಹರಿಯಾಣದ ವಕೀಲರೊಬ್ಬರು ಆರ್ ಟಿಐ ಸಲ್ಲಿಸಿ ಈ ಮಾಹಿತಿ ಪಡೆದಿದ್ದಾರೆ. ಇಟೆಲಿಯ