ಕೊರೋನಾಗೆ ಕೊಹ್ಲಿ ಏನೂ ಕೊಡುಗೆ ಕೊಟ್ಟಿಲ್ಲ ಎಂದವರಿಗೆ ಅನುಷ್ಕಾ ಶರ್ಮಾ ಉತ್ತರ

ಮುಂಬೈ| Krishnaveni K| Last Modified ಸೋಮವಾರ, 3 ಮೇ 2021 (10:10 IST)
ಮುಂಬೈ: ದೇಶದಲ್ಲಿ ಕೊರೋನಾ ಮಿತಿ ಮೀರಿದ್ದು, ಶ್ರೀಮಂತ ಕ್ರಿಕೆಟಿಗರು ತಮ್ಮ ಕೈಲಾದ ಸಹಾಯ ಮಾಡಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇದೆ.

 
ಇದಕ್ಕೆ ಉತ್ತರವೆಂಬಂತೆ ಈಗಾಗಲೇ ಹಲವು ಐಪಿಎಲ್ ಕ್ರಿಕೆಟಿಗರು, ತಂಡಗಳು ತಮ್ಮ ಕೈಲಾದ ದೇಣಿಗೆ ನೀಡುತ್ತಿವೆ. ವಿದೇಶೀ ಆಟಗಾರರೂ ಕೊಡುಗೆ ನೀಡಿದ್ದಾರೆ. ಆದರೆ ವಿಶ್ವದ ಶ್ರೀಮಂತ ಕ್ರೀಡಾಳು ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಏನೂ ಕೊಡುಗೆ ನೀಡಿಲ್ಲ ಎಂದು ಕೆಲವರು ಆಕ್ಷೇಪಿಸಿದ್ದರು. ಇದಕ್ಕೆಲ್ಲಾ ಉತ್ತರವೆಂಬಂತೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ವಿಡಿಯೋ ಮೂಲಕ ತಾವೂ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸುವುದಾಗಿ ಘೋಷಿಸಿದ್ದಾರೆ.
 
ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಅನುಷ್ಕಾ ತಾವು ಮತ್ತು ಪತಿ ಕೊಹ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ತಮ್ಮ ಕೈ ಜೋಡಿಸಲಿದ್ದೇವೆ. ಅದು ಯಾವ ರೀತಿ, ಜನರು ಅದಕ್ಕೆ ಯಾವ ರೀತಿ ಕೈ ಜೋಡಿಸಬಹುದು ಎಂಬುದನ್ನು ಸದ್ಯದಲ್ಲೇ ತಿಳಿಸುತ್ತೇವೆ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :