ನವದೆಹಲಿ: ಬಿಸಿಸಿಐ ಮೇಲೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಖತ್ ಗರಂ ಆಗಿದ್ದಾರೆ. ಬಿಸಿಸಿಐ ನಮಗೆ ಉಸಿರಾಡುವುದಕ್ಕೂ ಅವಕಾಶವಿಲ್ಲದಷ್ಟು ಪ್ರವಾಸಗಳನ್ನು ನಿಗದಿ ಮಾಡಿದೆ. ಕ್ರಿಕೆಟಿಗರನ್ನು ಯಂತ್ರದಂತೆ ನೋಡಲಾಗುತ್ತಿದೆ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಾಯಗೊಂಡ ಆಟಗಾರರ ಮೇಲೂ ಒತ್ತಡ ಹೇರಲಾಗುತ್ತಿದೆ. ಬಿಸಿಸಿಐ ತಪ್ಪು ನಿರ್ಧಾರದಿಂದ ಎಲ್ಲರ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಟೀ ಇಂಡಿಯಾ ಈ ವರ್ಷದಲ್ಲಿ 40 ಪಂದ್ಯಗಳನ್ನು ಆಡಿದ್ದಾರೆ. ಬಿಸಿಸಿಐ ಆಡಳಿತ ಮಂಡಳಿ