ಮುಂಬೈ: ನ್ಯೂಜಿಲೆಂಡ್ ನಲ್ಲಿ ಹೀನಾಯ ಸರಣಿ ಸೋಲಿನ ಬಳಿಕ, ರನ್ ಬರ ಎದುರಿಸುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಟ್ವೀಟ್ ಒಂದು ಈಗ ಅಭಿಮಾನಿಗಳಲ್ಲಿ ಗೊಂದಲ ಹುಟ್ಟು ಹಾಕಿದೆ.ಬದಲಾವಣೆಯೇ ನಿರಂತರ ಎಂಬರ್ಥದಲ್ಲಿ ಫೋಟೋ ಜತೆಗೆ ಟ್ವೀಟ್ ಮಾಡಿರುವ ಕೊಹ್ಲಿ, ಅಭಿಮಾನಿಗಳ ತಲೆಯಲ್ಲಿ ಅನುಮಾನದ ಹುಳ ಬಿಟ್ಟಿದ್ದಾರೆ. ಅಷ್ಟಕ್ಕೂ ಕೊಹ್ಲಿ ಯಾಕೆ ಇಂತಹದ್ದೊಂದು ಟ್ವೀಟ್ ಮಾಡಿದರು ಎಂದು ಅಭಿಮಾನಿಗಳು ತಮಗೆ ತೋಚಿದಂತೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.ಜತೆಗೆ